top of page
by Sateesh Narasimhaiah
ನನ್ನ ಬ್ಲಾಗಿಗೆ ಸ್ವಾಗತ.
ನಾನು ಸತೀಶ್ ನರಸಿಂಹಯ್ಯ. ಹುಟ್ಟಿದ್ದು, ಬಾಲ್ಯವನ್ನು ಕಳೆದಿದ್ದು, ಬೆಳೆದದ್ದು ಎಲ್ಲ ಕೆಂಪೇಗೌಡರ ನಾಡಾದ ಬೆಂದಕಾಳೂರಿನಲ್ಲಿ. ಅಂದರೆ ಕರುನಾಡ ರಾಜಧಾನಿ ಬೆಂಗಳೂರಿನಲ್ಲಿ.
ನಾನು ವಿಜ್ಞಾನದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು ಈಗ ಕರ್ನಾಟಕ ರಾಜ್ಯ ಸರ್ಕಾರದ ಆಡಳಿತ ಕೇಂದ್ರವಾದ ವಿಧಾನಸೌಧದ ಅರ್ಥಿಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ .
ನನ್ನ ಹವ್ಯಾಸಗಳು ಪ್ರವಾಸ, (ಹೊಸ ಹೊಸ ಪ್ರವಾಸಿ ಸ್ಥಳಗಳನ್ನು ವೀಕ್ಷಿಸುವದು) ಚಾರಣ, ಛಾಯಾಗ್ರಹಣ, ಮತ್ತು ಹೊಸ ವಿಷಯಗಳ ಅದರಲ್ಲೂ ಗಣಕಯಂತ್ರಕ್ಕೆ ಸಂಬಂಧಿಸಿದಂತೆ ಅರಿವಿಟ್ಟುಕೊಳ್ಳುವುದು, ಮನಸ್ಸಿಗನಿಸಿದ್ದನ್ನು ಸಣ್ಣ ಪುಟ್ಟ ಲೇಖನ ಬರೆಯುವುದರ ಮೂಲಕ ಅಭಿವ್ಯಕ್ತಿಸುವುದು, ಇಂಪಾದ ಸಂಗೀತ ಕೇಳುವುದು, ಜೀವನದ ವಿವಿಧ ಅನುಭವಗಳನ್ನು ವೀಕ್ಷಿಸಿದ ಹೊಸ ಸ್ಥಳಗಳ ಛಾಯಾಚಿತ್ರಗಳೊಂದಿಗೆ ಈ ನನ್ನ ಬ್ಲಾಗ್ ಮೂಲಕ ತಮ್ಮೊಂದಿಗೆ ಹಂಚಿಕೊಳ್ಳುವುದು ಇತ್ಯಾದಿ ಇತ್ಯಾದಿ
ಧನ್ಯವಾದಗಳು......
bottom of page